ಮಂಗಳವಾರ, ಮೇ 8, 2012

ಹಕ್ಕಿಯ ಗೂಡು


ತಮ್ಮದೆ ಭಾಷೆಯಲ್ಲಿ ಮಾತನಾಡುತ್ತ ಅಕ್ಕಪಕ್ಕದಲ್ಲಿ ಸಿಗುವ ಕಸ ಕಡ್ಡಿಗಳಿಂದ ರಸವತ್ತಾದ ಗೂಡು ನಿರ್ಮಿಸಿಕೊಳ್ಳುತ್ತಿರುವ ಈ ಹಕ್ಕಿಗಳ ಕೌಶಲ್ಯ ಅಚ್ಚರಿಗೊಳಿಸುತ್ತದೆ. ಮೊಟ್ಟೆಯಿಟ್ಟು, ಕಾವುಕೊಟ್ಟು, ಮರಿ ಮಾಡಿ ಅವುಗಳ ಆರೈಕೆ ಮಾಡುವುದನ್ನು ನೋಡಿದರೆ.... ನಿಸರ್ಗ ನಿಯಮದ ಬಗ್ಗೆ ಅಚ್ಚರಿಯಾಗುತ್ತದೆ. 








 

ಶುಕ್ರವಾರ, ಆಗಸ್ಟ್ 28, 2009

ನಮ್ಮೂರು.....



ಮಳೆಗಾಲದ ಸೋನೆಯಲಿ ಮಿಂದೆದ್ದು ಚೆಲುವ ಹೊದ್ದುನಿಂತ ನಮ್ಮೂರ ಸೊಬಗು..... ಮೈ ಮನಗಳಿಗೆ ಮುದ ನೀಡಿ ಕಣ್ಣಿಗೆ ತಂಪನೀಯುತ್ತದೆ. ಬೆಂಗಳೂರಿನಲ್ಲಿ ಹುಡುಕಿಕೊಂಡು ಹೋದರೆ ಸಿಗಬಹುದಾದ ಚಿತ್ರಗಳು ನಮ್ಮೂರಂತಹ ಊರಲ್ಲಿ ಸಾಮಾನ್ಯ. ಊರಲ್ಲಿರುವ ಗಿಡ ಮರಗಳು, ಹಸಿರು ಪೈರಿನ ಹೊದಕೆಯುಟ್ಟ ಗದ್ದೆಗಳು, ಗದ್ದೆಗಳಲ್ಲಿ ಹಕ್ಕಿಗಳ ಕಲರವ... ಮನೆಯ ಮಾಡಿಗೆ ಗೂಡು ಕಟ್ಟಿ ನಲಿದಾಡುವ ಹಕ್ಕಿಗಳು.... ಸಲ ಚೌತಿ ಹಬ್ಬಕ್ಕೆ ಹೋದಾಗ ಚಕ್ಕುಲಿ ಮೋದಕಗಳ ಜೊತೆ ಸಿಕ್ಕ ನಿಸರ್ಗದ ಕೊಡುಗೆಗಳು. ಜಡಿ ಮಳೆಯಲ್ಲಿ ಮಡದಿಯೊಡನೆ ಕೊಡೆ ಹಿಡಿದು ನಡೆವಾಗ ನಮ್ಮ ಚಿಕ್ಕಂದಿನ ದಿನಗಳ ಮಾತು....